ब्रेकिंग
ಬಂಗಾಳ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದ ಮಮತಾ ಬ್ಯಾನರ್ಜಿ; ಬಿಜೆಪಿ ಮುಂದಿರುವ ಕಾನೂನು ಆಯ್ಕೆಗಳೇನು? ಮೋದಿ ಶುಭಾಶಯಕ್ಕೆ 1 ದಿನದ ಬಳಿಕ ದಳಪತಿ ವಿಜಯ್ ಕುತೂಹಲಕಾರಿ ಪ್ರತಿಕ್ರಿಯೆ; ಮೊದಲ ಟ್ವೀಟ್‌ನಲ್ಲೇ ಟಾಂಗ್‌! ಮತ್ತೆ ಉಪಚುನಾವಣೆ ಸೋತ ಬಿಜೆಪಿ : ಗೋಲ್ಡನ್ ಚಾನ್ಸ್ ಕೈತಪ್ಪಿದರೂ, ಪಾಠ ಕಲಿಯದ ಕಮಲ ಪಡೆ? ಪ್ರಧಾನಿ ಮೋದಿ ಮೇ 10 ಕ್ಕೆ ಕರ್ನಾಟಕಕ್ಕೆ ಆಗಮನ; ಬೆಂಗಳೂರಿಗೆ ಭೇಟಿ; ಏನೆಲ್ಲಾ ಕಾರ್ಯಕ್ರಮ? ಅಣ್ಣಾಮಲೈ ಹಾಕಿಕೊಟ್ಟಿದ್ದ ಸ್ಟೇಜ್’ನಲ್ಲಿ ವಿಜಯ್ ಭರ್ಜರಿ ಸ್ಟೆಪ್ : ದ್ರಾವಿಡರ ಲೆಕ್ಕಾಚಾರದಲ್ಲಿ ಅಮಿತ್ ಶಾ ಫೇಲ್? ಸಮಯ ನೀಡದ ಸ್ಥಳೀಯ ಶಾಸಕರು: ಆರು ತಿಂಗಳಿಂದ ಉದ್ಘಾಟನೆಗೆ ಕಾಯುತ್ತಿರುವ 22 ಇಂದಿರಾ ಕ್ಯಾಂಟೀನ್! ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್​ ಯೋಜನೆ ವಿರೋಧಿಸಿ ಅಹೋರಾತ್ರಿ ಧರಣಿ ಬೆಳಗಾವಿಯಲ್ಲಿ ಮಹಾಮಳೆಗೆ ಬೆಚ್ಚಿಬಿದ್ದ ಜನ; ಡಿಸಿ ಕಚೇರಿಗೆ ನುಗ್ಗಿದ ನೀರು, ನದಿಯಂತಾದ ರಸ್ತೆಗಳು! ಹಜ್ ಯಾತ್ರಿಕರಿಗೆ ಮತ್ತೆ ಪ್ರತ್ಯೇಕ ಟರ್ಮಿನಲ್ ಆರಂಭಿಸುವ ನಿರೀಕ್ಷೆಯಿದೆ: ಹಜ್ ಸಚಿವ ರಹೀಂ ಖಾನ್ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಸಾವು ಪ್ರಕರಣ; ಬೆಂಗಳೂರಿನಲ್ಲಿ ದೂರು ದಾಖಲಿಸಿದ ಎನ್‌ಸಿಪಿ ಎಸ್​ಪಿ ಶಾಸಕ ರೋಹಿತ್ ಪವ...
ಆಟಕರ್ನಾಟಕಟಾಪ್ ನ್ಯೂಸ್ದೇಶಮಿಸ್ ಮಾಡಬೇಡಿರಾಜಕೀಯರಾಜ್ಯವಿದೇಶಸಿನಿಮಾಸೀರಿಯಲ್

ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್​ ಯೋಜನೆ ವಿರೋಧಿಸಿ ಅಹೋರಾತ್ರಿ ಧರಣಿ

ಶಿವಮೊಗ್ಗ: ಪಶ್ಚಿಮಘಟ್ಟದಲ್ಲಿ ಕರ್ನಾಟಕ ವಿದ್ಯುತ್ ನಿಗಮ ಪ್ರಾರಂಭಿಸಲು ಪ್ರಯತ್ನಿಸುತ್ತಿರುವ ಶರಾವತಿ ಪಂಪ್ಡ್ ಸ್ಟೋರೇಜ್​​ ಯೋಜನೆ ವಿರೋಧಿಸಿ ಶಿವಮೊಗ್ಗದಲ್ಲಿಂದು ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗಿದೆ. ನಗರದ ಶಿವಮೂರ್ತಿ ವೃತ್ತದಲ್ಲಿ ಪರಿಸರಕ್ಕಾಗಿ ನಾವು ಸಂಘಟನೆ ಹಾಗೂ ರಾಷ್ಟ್ರಭಕ್ತರ ಬಳಗದ ವತಿಯಿಂದ ಅಹೋರಾತ್ರಿ ಧರಣಿ ಪ್ರಾರಂಭಿಸಲಾಗಿದೆ.

ಧರಣಿಯಲ್ಲಿ ಬಂಗಾರಮಕ್ಕಿಯ ಮಾರುತಿ ಗುರೂಜಿ, ಎ.ಟಿ.ರಾಮಸ್ವಾಮಿ, ಕೆ.ಎಸ್.ಈಶ್ವರಪ್ಪ, ಮಹಿಮ ಪಟೇಲ್, ಕೆ.ಈ.ಕಾಂತೇಶ್, ಕುಮಾರಸ್ವಾಮಿ, ಶ್ರೀಪತಿ ಸೇರಿದಂತೆ ನೂರಕ್ಕೂ ಹೆಚ್ಚು ಪರಿಸರ ಪ್ರೇಮಿಗಳು ಹಾಗೂ ರಾಷ್ಟ್ರಭಕ್ತ ಬಳಗದವರು ಭಾಗಿಯಾಗಿದ್ದಾರೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪರಿಸರಕ್ಕೆ ಮಾರಕವಾಗಿದೆ. ಈ ಯೋಜನೆಯಿಂದ ರಾಜ್ಯ ಸರ್ಕಾರ ವಿದ್ಯುತ್ ಉತ್ಪಾದನೆ ಮಾಡಲು ಹೊರಟಿದ್ದು, ಇದರಿಂದ ಸಾವಿರಾರು ವನ್ಯಜೀವಿಗಳು, ನೂರಾರು ಎಕರೆ ಅರಣ್ಯ ಭೂಮಿ ಹಾಳಾಗುತ್ತದೆ. ಇಲ್ಲಿನ ನದಿಗಳಿಗೆ ಹಾನಿಯಾಗುತ್ತಿದೆ. ಇದರಿಂದ ಈ ಯೋಜನೆ ಕೈ ಬಿಡಬೇಕು ಎಂದು ಆಗ್ರಹಿಸಲಾಗುತ್ತಿದೆ. ಆದರೆ, ಇದುವರೆಗೂ ರಾಜ್ಯ ಸರ್ಕಾರ ಇದರ ಬಗ್ಗೆ ಸಕಾರಾತ್ಮಕವಾಗಿದೆ. ಕೇಂದ್ರದ ಪರಿಸರ ವಿಭಾಗ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಯೋಜನೆಗೆ ತಾತ್ಕಾಲಿಕ ತಡೆಯನ್ನು ತರುವ ಕೆಲಸ ಮಾಡಿದ್ದೇವೆ. ಒಂದು ಹಂತದಲ್ಲಿ ತಾತ್ಕಾಲಿಕ ತಡೆ ಸಿಕ್ಕಿದೆ. ಪೂರ್ಣವಾಗಿ ಈ ಯೋಜನೆ ನಿಲ್ಲುವ ಬಗ್ಗೆ ನ್ಯಾಯಾಲಯದಿಂದ ಸರ್ಕಾರಕ್ಕೆ ಆದೇಶವಾಗಬೇಕು. ಇಲ್ಲಿ ಯುನೆಸ್ಕೋ ಮಧ್ಯ ಪ್ರವೇಶ ಮಾಡಬೇಕು. ಪಶ್ಚಿಮ ಘಟ್ಟ ಉಳಿಸಬೇಕು. ಈ ನಿಟ್ಟಿನಲ್ಲಿ ಯುನೆಸ್ಕೋಗೆ ಮನವಿ ಮಾಡಿದ್ದೇವೆ. ಅದಕ್ಕೆ ಸ್ಪಂದನೆ ಮಾಡಿದ್ದಾರೆ. ಯುನೆಸ್ಕೋ ಸಂಸ್ಥೆ ಜೊತೆ ಸೇರಿ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಅಹೋರಾತ್ರಿ ಧರಣಿ ಕುರಿತು ಮಾತನಾಡಿದ ರಾಷ್ಟ್ರ ಭಕ್ತ ಬಳಗದ ಕೆ.ಎಸ್.ಈಶ್ವರಪ್ಪ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪಶ್ಚಿಮಘಟ್ಟಗಳಿಗೆ ಮಾರಕವಾಗಲಿದೆ. ಅಲ್ಲಿ ವಾಸಿಸುವ ಪ್ರಾಣಿಗಳು ಹಾಗೂ ಹತ್ತಾರು ಸಾವಿರ ಮರಗಳು ನಾಶವಾಗುತ್ತವೆ. ಇದರಿಂದ ಈ ಯೋಜನೆ ಆಗಬಾರದು ಎಂದು ನಾನು ಮಾತ್ರ ಕೇಳುತ್ತಿಲ್ಲ. ಕೇಂದ್ರದ ಅರಣ್ಯ ಸಮಿತಿ ಸಹ ಹೇಳಿದೆ. ಇದಕ್ಕೆ ತುಂಬಾ ಸ್ಪಷ್ಟವಾದ ವರದಿಯನ್ನು ನೀಡಿದೆ. ಇದರಿಂದ ಸರ್ಕಾರ ಇದನ್ನು ಗಮನಿಸಬೇಕು ಎಂದರು.

ರಾಜ್ಯ ಹೈಕೋರ್ಟ್ ಸಹ ಕೆಪಿಸಿ ಅಧಿಕಾರಿಗಳಿಗೆ ಛೀಮಾರಿ ಹಾಕಿದೆ. ಅಲ್ಲದೇ ಜೂನ್ 10ನೇ ತಾರೀಖಿನ ತನಕ ಯಾವ ಕಾಮಗಾರಿ ನಡೆಸಬಾರದು ಎಂದು ತಿಳಿಸಿದೆ. ಇದರಿಂದ ಈ ಯೋಜನೆ ಸಾರ್ವಜನಿಕರಿಗೆ, ಪ್ರಾಣಿ ಪಕ್ಷಿ ಸಂಕುಲಕ್ಕೂ ಮಾರಕವಾಗಿದೆ. ಇದರಿಂದ ಪರಿಸರಾಸಕ್ತರು, ಸಾಧುಸಂತರು, ವಿಜ್ಞಾನಿಗಳು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಯೋಜನೆ ಜಾರಿ ಮಾಡಬಾರದು ಎಂದು ಆಗ್ರಹಿಸಿದರು.

Related Articles

Leave a Reply

Your email address will not be published. Required fields are marked *

Back to top button