ब्रेकिंग
ಬಂಗಾಳ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದ ಮಮತಾ ಬ್ಯಾನರ್ಜಿ; ಬಿಜೆಪಿ ಮುಂದಿರುವ ಕಾನೂನು ಆಯ್ಕೆಗಳೇನು? ಮೋದಿ ಶುಭಾಶಯಕ್ಕೆ 1 ದಿನದ ಬಳಿಕ ದಳಪತಿ ವಿಜಯ್ ಕುತೂಹಲಕಾರಿ ಪ್ರತಿಕ್ರಿಯೆ; ಮೊದಲ ಟ್ವೀಟ್‌ನಲ್ಲೇ ಟಾಂಗ್‌! ಮತ್ತೆ ಉಪಚುನಾವಣೆ ಸೋತ ಬಿಜೆಪಿ : ಗೋಲ್ಡನ್ ಚಾನ್ಸ್ ಕೈತಪ್ಪಿದರೂ, ಪಾಠ ಕಲಿಯದ ಕಮಲ ಪಡೆ? ಪ್ರಧಾನಿ ಮೋದಿ ಮೇ 10 ಕ್ಕೆ ಕರ್ನಾಟಕಕ್ಕೆ ಆಗಮನ; ಬೆಂಗಳೂರಿಗೆ ಭೇಟಿ; ಏನೆಲ್ಲಾ ಕಾರ್ಯಕ್ರಮ? ಅಣ್ಣಾಮಲೈ ಹಾಕಿಕೊಟ್ಟಿದ್ದ ಸ್ಟೇಜ್’ನಲ್ಲಿ ವಿಜಯ್ ಭರ್ಜರಿ ಸ್ಟೆಪ್ : ದ್ರಾವಿಡರ ಲೆಕ್ಕಾಚಾರದಲ್ಲಿ ಅಮಿತ್ ಶಾ ಫೇಲ್? ಸಮಯ ನೀಡದ ಸ್ಥಳೀಯ ಶಾಸಕರು: ಆರು ತಿಂಗಳಿಂದ ಉದ್ಘಾಟನೆಗೆ ಕಾಯುತ್ತಿರುವ 22 ಇಂದಿರಾ ಕ್ಯಾಂಟೀನ್! ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್​ ಯೋಜನೆ ವಿರೋಧಿಸಿ ಅಹೋರಾತ್ರಿ ಧರಣಿ ಬೆಳಗಾವಿಯಲ್ಲಿ ಮಹಾಮಳೆಗೆ ಬೆಚ್ಚಿಬಿದ್ದ ಜನ; ಡಿಸಿ ಕಚೇರಿಗೆ ನುಗ್ಗಿದ ನೀರು, ನದಿಯಂತಾದ ರಸ್ತೆಗಳು! ಹಜ್ ಯಾತ್ರಿಕರಿಗೆ ಮತ್ತೆ ಪ್ರತ್ಯೇಕ ಟರ್ಮಿನಲ್ ಆರಂಭಿಸುವ ನಿರೀಕ್ಷೆಯಿದೆ: ಹಜ್ ಸಚಿವ ರಹೀಂ ಖಾನ್ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಸಾವು ಪ್ರಕರಣ; ಬೆಂಗಳೂರಿನಲ್ಲಿ ದೂರು ದಾಖಲಿಸಿದ ಎನ್‌ಸಿಪಿ ಎಸ್​ಪಿ ಶಾಸಕ ರೋಹಿತ್ ಪವ...
ಆಟಕರ್ನಾಟಕಟಾಪ್ ನ್ಯೂಸ್ದೇಶಮಿಸ್ ಮಾಡಬೇಡಿರಾಜಕೀಯರಾಜ್ಯವಿದೇಶಸಿನಿಮಾಸೀರಿಯಲ್

ಅಣ್ಣಾಮಲೈ ಹಾಕಿಕೊಟ್ಟಿದ್ದ ಸ್ಟೇಜ್’ನಲ್ಲಿ ವಿಜಯ್ ಭರ್ಜರಿ ಸ್ಟೆಪ್ : ದ್ರಾವಿಡರ ಲೆಕ್ಕಾಚಾರದಲ್ಲಿ ಅಮಿತ್ ಶಾ ಫೇಲ್?

Annamalai Vs TVK Vijay : ತಮಿಳುನಾಡು ವಿಧಾನಸಭಾ ಸಂಪೂರ್ಣ ಫಲಿತಾಂಶ ಹೊರಬಿದ್ದಿದೆ. ಎಲ್ಲಾ ಎಕ್ಸಿಟ್ ಪೋಲ್ ಅನ್ನು ಫಲಿತಾಂಶ ಉಲ್ಟಾ ಹೊಡೆಯುವಂತೆ ಮಾಡಿದೆ. ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿರುವ ವಿಜಯ್ ಅವರ ಪಾರ್ಟಿ, ಅತಿದೊಟ್ಟ ಪಾರ್ಟಿಯಾಗಿ ಹೊರಹೊಮ್ಮಿದೆ. ಆದರೆ, ವಿಜಯ್’ಗೆ ಸರಳ ಬಹುಮತದ ನಂಬರ್ ಬರಲು ಇನ್ನೂ ಹನ್ನೊಂದು ಸೀಟ್ ಬೇಕಿದೆ. ಬಿಜೆಪಿ ನಾಯಕ ಅಣ್ಣಾಮಲೈ ಹಾಕಿಕೊಟ್ಟ ಗ್ರೌಂಡ್ ವರ್ಕ್ ಅನ್ನು ವಿಜಯ್ ಹೇಗೆ ಬಳಸಿಕೊಂಡರು ಎನ್ನುವುದನ್ನು ಇಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ.

ಚೆನ್ನೈ : ಈ ರೀತಿಯ ಅಭೂತಪೂರ್ವ ಜನಾದೇಶವನ್ನು ತಮಿಳ್ ಮಕ್ಕಳ್ ಕೊಡುತ್ತಾರೆಂದು ಬಹುಷಃ ಟಿವಿಕೆ (Tamilaga Vettri Kazhagam) ಸಂಸ್ಥಾಪಕ ಸಿ.ಜೋಸೆಫ್ ವಿಜಯ್ ಕೂಡಾ ಊಹಿಸಿರಲಿಕ್ಕಿಲ್ಲ. ಆದರೆ, ಭರ್ಜರಿ ಮ್ಯಾನ್ಡೇಟ್ ಬಂದಿದ್ದರೂ, ಸರಳ ಬಹುಮತಕ್ಕೆ ಬೇಕಾದ ನಂಬರ್ ವಿಜಯ್’ಗೆ ದಕ್ಕಲಿಲ್ಲ. ವಿಜಯ್ ಅವರ ಪಾರ್ಟಿಗೆ ಮತಎಣಿಕೆಯ ವೇಳೆ early trending ಸಿಕ್ಕ ಬೆನ್ನಲ್ಲೇ, ಬಿಜೆಪಿ ತಮಿಳುನಾಡು ಘಟಕದ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿದ್ದರು. ವಿಜಯ್ ಲೀಡ್ ಸಾಧಿಸುತ್ತಿರುವುದಕ್ಕೂ, ಅಣ್ಣಾಮಲೈಗೂ ಏನು ಸಂಬಂಧ? ಮುಂದೆ ವಿವರಿಸಲಾಗಿದೆ.

ವಿಶ್ವದ ಅತ್ಯಂತ ಜನಪ್ರಿಯ ನಾಯಕರಲ್ಲಿ ಮಂಚೂಣಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಲು ತಮಿಳುನಾಡಿನ ಜನ ಮುಗಿಬೀಳುತ್ತಾರೆ. ರೋಡ್’ಶೋನಲ್ಲಿ ಜನಸಾಗರವೇ ಹರಿದುಬರುತ್ತದೆ. ಆದರೆ, ಮೋದಿ ಅವರನ್ನು ನೋಡಲು ಬರುವ ಜನ, ಮತಗಟ್ಟೆಗೆ ಹೋಗುವಾಗ ದ್ರಾವಿಡ ಪಾರ್ಟಿಗಳಿಗೆ ಮತಚಲಾಯಿಸುತ್ತಾರೆ ಎನ್ನುವುದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ತಲೆನೋವಾಗಿ ಪರಿಣಮಿಸಿತ್ತು. ಅದಕ್ಕಾಗಿಯೇ, ಬೆಂಗಳೂರು ದಕ್ಷಿಣದ ಡಿಸಿಪಿಯಾಗಿದ್ದ ಐಪಿಎಸ್ ಕೆ.ಅಣ್ಣಾಮಲೈ ಅವರನ್ನು ರಾಜೀನಾಮೆ ಕೊಡಿಸಿ, ತಮಿಳುನಾಡಿಗೆ ಕರತಂದಿದ್ದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಇಟ್ಟ ತಪ್ಪು ಹೆಜ್ಜೆ

ಕರ್ನಾಟಕದಲ್ಲಿ ಅತ್ಯಂತ ದಕ್ಷ ಆಫೀಸರ್ ಎನ್ನುವ ಹೆಸರನ್ನು ಪಡೆದಿದ್ದ ಅಣ್ಣಾಮಲೈ ಉತ್ತಮ ವಾಗ್ಮಿ ಕೂಡಾ. ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾದ ಅಣ್ಣಾಮಲೈ, ತಮಿಳುನಾಡಿನ ಜನತೆಯ ನಾಡಿಮಿಡಿತವನ್ನು ಬಹುಬೇಗ ಅರಿತುಕೊಂಡವರು. ಅತ್ಯಂತ ಅಲ್ಪ ಅವಧಿಯಲ್ಲಿ ಅಲ್ಲಿನ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದರು. ಒಂದು ಹಂತಕ್ಕೆ ಎಂಕೆ ಸ್ಟಾಲಿನ್, ಎಡಪ್ಪಾಡಿ ಪಳನಿಸ್ವಾಮಿ ಜನಪ್ರಿಯತೆಯ ಲೆವೆಲ್’ಗೆ ಬಂದು ನಿಂತರು.

ರಾಜಕೀಯ ಎಂದ ಮೇಲೆ ರಾಜಕಾರಣ ಇದ್ದೇ ಇರುತ್ತದೆ ಎನ್ನುವ ಹಾಗೇ, ಬಿಜೆಪಿ ಮಿತ್ರ ಪಕ್ಷವಾದ ಎಡಪ್ಪಾಡಿ ಪಳನಿಸ್ವಾಮಿಗೆ ಅಣ್ಣಾಮಲೈ ಜನಪ್ರಿಯತೆ ಹಿಡಿಸಲಿಲ್ಲ. ಅಮಿತ್ ಶಾಗೆ ಹೇಳಿ, ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಿದರು. ಅಲ್ಲಿಗೆ ತಮಿಳುನಾಡಿನಲ್ಲಿ ಬಿಜೆಪಿಯ ಡೌನ್’ಫಾಲ್ ಆರಂಭವಾಯಿತು. ದೇಶದ ಚಾಣಕ್ಯ ಎಂದೇ ಕರೆಯಲ್ಪಡುವ ಅಮಿತ್ ಶಾ ಅವರಿಟ್ಟ ತಪ್ಪು ಹೆಜ್ಜೆ ಇದು ಎಂದು ವಿಶ್ಲೇಷಿಸಲಾಯಿತು.

ಡಿಎಂಕೆ ಸರ್ಕಾರದ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದ ಅಣ್ಣಾಮಲೈ

ಜುಲೈ 8, 2021ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಅಣ್ಣಾಮಲೈ, ಕಾಲಿಗೆ ಚಕ್ರ ಕಟ್ಟಿಕೊಂಡಂತೆ, ತಮಿಳುನಾಡಿನ ಮೂಲೆಮೂಲೆಗೂ ಸುತ್ತಿದರು. ಯುವ ಮತ್ತು ಮಹಿಳಾ ಸಮುದಾಯವನ್ನು ಬಿಜೆಪಿಯತ್ತ ಸೆಳೆಯುವ ಅವರ ಟಾರ್ಗೆಟ್ ಹತ್ತಿರಹತ್ತಿರ ಬರುತ್ತಿತ್ತು. ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ವಿರುದ್ದ ನಿರಂತರವಾಗಿ ತಿರುಗಿಬಿದ್ದರು. ಸರ್ಕಾರದ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಜನರ ಮುಂದೆ ತೆರೆದಿಟ್ಟರು. ಅಷ್ಟೊತ್ತಿಗೆ ಲೋಕಸಭಾ ಚುನಾವಣೆ ಎದುರಾಯಿತು.

ತಮಿಳುನಾಡಿನ 39 ಕ್ಷೇತ್ರವನ್ನು ಡಿಎಂಕೆ ಮೈತ್ರಿಕೂಟ ಕ್ಲೀನ್ ಸ್ವೀಪ್ ಮಾಡಿತು, ಖುದ್ದು ಅಣ್ಣಾಮಲೈ, ಕೊಯಂಬತ್ತೂರಿನಲ್ಲಿ ಸೋಲುಂಡರು. ಆದರೆ, ಅಣ್ಣಾಮಲೈ, ಬಿಜೆಪಿಯನ್ನು ಬೆಳೆಸಿದ್ದ ರೀತಿಗೆ ವಿರೋಧಿಗಳು ಆಶ್ಚರ್ಯವನ್ನು ವ್ಯಕ್ತ ಪಡಿಸಿದ್ದರು. ಬಿಜೆಪಿಯ ವೋಟ್ ಶೇರ್’ಅನ್ನು ಶೇ. 7.58ಕ್ಕೆ ಏರಿಸಿ ಶೇ. 11.24ಕ್ಕೆ ತಂದು ನಿಲ್ಲಿಸಿದರು. ಅಷ್ಟೇ ಅಲ್ಲದೇ, ಡಿಎಂಕೆಯ ವೋಟ್ ಶೇರ್’ಅನ್ನು ಶೇ. 6.59ಕ್ಕೆ ಇಳಿಸಿದ್ದರು. ಎಐಎಡಿಎಂಕೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಹಿನ್ನಲೆಯಲ್ಲಿ, ಬಿಜೆಪಿ ವೋಟ್ ಡಿವೈಡ್ ಆಗಿತ್ತುಎನ್ನುವುದಕ್ಕೆ ಚುನಾವಣಾ ಫಲಿತಾಂಶ ಸಾಕ್ಷಿಯಾಯಿತು.

ಎನ್ ಮಣ್, ಎನ್ ಮಕ್ಕಳ್ ಯಾತ್ರೆಗೆ ಅಭೂತಪೂರ್ವ ಜನಬೆಂಬಲ

ತಮಿಳುನಾಡಿನ ರಾಜಕೀಯ ಭೂಪಟದಲ್ಲಿ ಮನೆಮನದಲ್ಲೂ ಚರ್ಚೆಯಾಗುವಂತೆ ಮಾಡಿದ್ದು ಅಣ್ಣಾಮಲೈ ಅವರ ’ನನ್ನ ಮಣ್ಣು, ನನ್ನ ಜನ’ ಎನ್ನುವ ಐತಿಹಾಸಿಕ ಪಾದಯಾತ್ರೆ. ಜುಲೈ 28, 2023ರಂದು ಹಿಂದೂಗಳ ಪವಿತ್ರ ಪುಣ್ಯಸ್ಥಳ ರಾಮೇಶ್ವರಂನಿಂದ ಆರಂಭವಾದ ಈ ಯಾತ್ರೆ, ತಿರುಪ್ಪೂರ್’ನಲ್ಲಿ ಫೆಬ್ರವರಿ 2024ರಲ್ಲಿ ಮುಕ್ತಾಯಗೊಂಡಿತು. ಪಾದಯಾತ್ರೆಯನ್ನು ಅಮಿತ್ ಶಾ ಉದ್ಗಾಟಿಸಿದರೆ, ಸಮಾರೋಪ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಆಗಮಿಸಿದ್ದರು.

ಬಿಜೆಪಿಯ ಹೆಸರನ್ನು ತಮಿಳುನಾಡಿನ ಹಳ್ಳಿಹಳ್ಳಿಯಲ್ಲಿ ಪಸರಿಸುವಲ್ಲಿ ಈ ಯಾತ್ರೆ, ದೊಡ್ಡ ಕೆಲಸವನ್ನು ಮಾಡಿತ್ತು. ಈ ಯಾತ್ರೆ, ಬಹುತೇಕ, ಡಿಎಂಕೆ ಮೈತ್ರಿಕೂಟದ ವಿರುದ್ದವಾಗಿತ್ತು. ಆದರೆ, ಬದಲಾದ ರಾಜಕೀಯ ಲೆಕ್ಕಾಚಾರದಲ್ಲಿ, ಎಐಎಡಿಎಂಕೆ ಮೈತ್ರಿಗಾಗಿ, ಅಣ್ಣಾಮಲೈ ಸೈಡ್ಲೈನ್ ಆಗಬೇಕಾಯಿತು. ರಾಜ್ಯಾಧ್ಯಕ್ಷ ಹುದ್ದೆಯಿಂದ ಅವರನ್ನು ಕೆಳಗಿಳಿಸಲಾಯಿತು. ನೈನಾರ್ ರಾಜೇಂದ್ರನ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದರು. ಅಸೆಂಬ್ಲಿ ಚುನಾವಣೆಗೆ, ಅಣ್ಣಾಮಲೈ ಅವರನ್ನು ಹೊರಗಿಟ್ಟು, ಬಿಜೆಪಿ ಪಟ್ಟಿಯನ್ನು ಪ್ರಕಟಿಸಲಾಯಿತು.

ಅಣ್ಣಾಮಲೈ ಹಾಕಿದ ಸ್ಟೇಜ್ ನಲ್ಲಿ ದಳಪತಿ ವಿಜಯ್ ಡ್ಯಾನ್ಸ್

ತಮಿಳುನಾಡಿನ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎನ್ನುವುದನ್ನು ಅಣ್ಣಾಮಲೈ, ಬಿಜೆಪಿಯ ಹಿರಿಯ ನಾಯಕರಿಗೆ ಅಂಕಿಅಂಶದ ಸಮೇತ ವಿವರಿಸಿದ್ದರು. ಆದರೆ, ಬಿಜೆಪಿ ಅವರ ಮಾತಿಗೆ ಬೆಲೆ ಕೊಡದೇ, ಮೈತ್ರಿ ರಾಜಕಾರಣಕ್ಕೆ ಬೆಲೆ ಕೊಟ್ಟಿತು. ಅಣ್ಣಾಮಲೈಗೆ ಪ್ರಾತಿನಿಧ್ಯ ಸಿಗದೇ ಇದ್ದದ್ದು, ಬಿಜೆಪಿ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಯಿತು. ಇದರ ಲಾಭವನ್ನು ವಿಜಯ್ ಪಡೆದುಕೊಂಡರು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಡಿಎಂಕೆ ಮೈತ್ರಿಕೂಟದ ಸರ್ಕಾರದ ವಿರುದ್ದ ಹೋರಾಡಿದ್ದು ಅಣ್ಣಾಮಲೈ. ತಮಿಳುನಾಡು ರಾಜ್ಯದ ಮನೆಮನೆಯಲ್ಲೂ ಸ್ಟಾಲಿನ್ ಸರ್ಕಾರದ ಭ್ರಷ್ಟಾಚಾರದ ವಿರುದ್ದ ಜನರಿಗೆ ಮಾಹಿತಿ ನೀಡಿದ್ದು ಅಣ್ಣಾಮಲೈ. ಆದರೆ, ಚುನಾವಣಾ ಹೊಂದಾಣಿಕೆಯ ರಾಜಕಾರಣದಿಂದಾಗಿ, ಇದರ ಲಾಭವನ್ನು ಪಡೆದುಕೊಂಡಿದ್ದು ಟಿವಿಕೆ ಪಾರ್ಟಿ ಮತ್ತು ಸಂಸ್ಥಾಪಕ ಜೋಸೆಫ್ ವಿಜಯ್ ಎಂದು ವಿಶ್ಲೇಷಿಸಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button